1800-76 ಜರ್ಮನಿಯ ಪುರಾತತ್ತ್ವ ಸಂಶೋಧಕ ಮತ್ತು ಇತಿಹಾಸ ತಜ್ಞ. ನಾರ್ವೆಯ ಬರ್ಗೆನ್‍ನಲ್ಲಿ 1800 ಅಕ್ಟೋಬರ್ 22ರಂದು ಜನಿಸಿದ. ಈತ ಪ್ರಾರಂಭಿಕ ವಿಶ್ವವಿದ್ಯಾ ನಿಲಯ ಶಿಕ್ಷಣವನ್ನು ಕ್ರಿಸ್ಟಿಯಾನಿಯದಲ್ಲಿ ಪಡೆದುಕೊಂಡು ಅನಂತರ ಜರ್ಮನಿಗೆ ತೆರಳಿದ. ಹೆಡಿನ್‍ಬರ್ಗ್ ಮತ್ತು ಬಾನ್ ವಿಶ್ವವಿದ್ಯಾಲಯಗ ಳಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ. ಅಲ್ಲಿ ಸಂಸ್ಕøತದಲ್ಲಿ ಅಪಾರ ಜ್ಞಾನವನ್ನು ಸಂಪಾದಿಸಿದ. ಪ್ಯಾರಿಸ್ ಮತ್ತು ಲಂಡನ್‍ಗಳಲ್ಲಿ ವಿಶೇಷವಾಗಿ ನಾಟಕ ಮತ್ತು ತತ್ತ್ವಶಾಸ್ತ್ರಕ್ಕೆ ಸಂಬಂಧಪಟ್ಟ ಆಕರಗಳನ್ನು ಸಂಗ್ರಹಿಸುವುದರಲ್ಲಿ ಮೂರು ವರ್ಷ ಕಳೆದ. ಈ ಸಮಯದಲ್ಲಿ ಇ. ಬರ್ನೌಪ್ ಅವರೊಂದಿಗೆ ಇಸ್ಸೀ ಸುರ್ ಲೆ ಪಿಡ್ಲಿ ಎಂಬ ಕೃತಿಯನ್ನು, ಪ್ರಕಟಿಸಿದ (1826). ಅನಂತರ ಬಾನ್‍ಗೆ ತೆರಳಿ ಅರೇಬಿಕ್‍ನ್ನು ಅಭ್ಯಸಿಸಿ ಅರೇಬಿಕ್ ನೋಟಿಸಸ್ ಆಫ್ ದಿ ಜಿಯೋಗ್ರಫಿ ಆಫ್ ಪಂಜಾಬ್ ಎಂಬ ವಿಷಯದ ಮೇಲೆ ಪಿಎಚ್.ಡಿ ಪದವಿಯನ್ನು ಪಡೆದ(1827). ಪ್ರಾಚೀನ ಭಾರತೀಯ ಭಾಷೆ ಮತ್ತು ಸಾಹಿತ್ಯದ ಪ್ರಾಧ್ಯಾಪಕನಾಗಿ ನೇಮಕಗೊಂಡ (1840). 1841ರಲ್ಲಿ ಕೋಪನ್ ಹೆಗನ್‍ನಿಂದ ವಿಶೇಷ ಪದವಿಯ ಆಹ್ವಾನ ಬಂದರೂ ಅದನ್ನು ಸ್ವೀಕರಿಸಲಿಲ್ಲ.
 
ಆಗಸ್ಟ್ ಡಬ್ಲೂ ವೋನ್ ಷ್ಲೆಗೆಲ್‍ನೊಂದಿಗೆ ‘ಹಿತೋಪದೇಶ’ದ ಮೇಲೆ ವಿಮರ್ಶಾತ್ಮಕ ಕೃತಿಯನ್ನು ಪ್ರಕಟಿಸಿದ (1829-31) ಈ ಕೃತಿ ಸಂಸ್ಕøತ ಸಾಹಿತ್ಯದ ವಿಮರ್ಶನಾತ್ಮಕ ಅಧ್ಯಯನಕ್ಕೆ ನಾಂದಿಯಾಯಿತು. ಅದೇ ಸಮಯದಲ್ಲಿ ರಾಮಾಯಣದ 3 ಅಧ್ಯಾಯಗಳನ್ನು ಅನುವಾದಿ ಸುವ ಷ್ಲೆಗೆಲ್‍ನ ಕೆಲಸದಲ್ಲಿ ಈತ ಸಹಕರಿಸಿದ (1829-38). ಭವಭೂತಿ, ಧರ್ಮ, ಮಾಲತೀಮಾಧವ ಮತ್ತು ಸಂಪೂರ್ಣ ಸಾಂಖ್ಯದರ್ಶನದ ಲ್ಯಾಟಿನ್ ಅನುವಾದವನ್ನು ಹೊರತಂದ (1832). ಜಯದೇವನ ಪ್ರಖ್ಯಾತ ನಾಟಕ ಗೀತಗೋವಿಂದ ವನ್ನು ಪ್ರಾಕೃತದಿಂದ ಲ್ಯಾಟಿನ್ ಭಾಷೆಗೆ (1837) ಅನುವಾದಿಸಿದ. ಅಂಟಲೋಗಿಯ ಸಾಂಸ್ಕಿøಟಿಕ ಮರು ವರ್ಷ ಪ್ರಕಟಗೊಂಡಿತು. ಇದು ಸಾವಿರಾರು ಅಪ್ರಕಟಿತ ಸಂಸ್ಕøತ ಪಠ್ಯಗಳನ್ನೊಳ ಗೊಂಡಿದ್ದು ಜರ್ಮನಿಯ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕøತದ ಅಧ್ಯಯನಕ್ಕೆ ಪ್ರಚೋದನೆ ನೀಡಿತು. ಷ್ಲೆಗೆಲ್‍ನ ಅವರ ಭಗವದ್ಗೀತೆ ಕೃತಿಯ ಪರಿಷ್ಕøತ ರೂಪವನ್ನು ಹೊರತಂದು ಅನುವಾದ ಮಾಡಿ ಪ್ರಕಟಿಸಿದ (1846). ಈತ ತನ್ನ ಅಧ್ಯಯನವನ್ನು ಭಾರತೀಯ ಭಾಷೆಗೆ ಸೀಮಿತವಾಗಿರಿಸದೆ ಅನ್ಯ ಕ್ಷೇತ್ರಗಳಿಗೂ ವಿಸ್ತರಿಸಿಕೊಂಡ. ಜರ್ಮನ್ ಭಾಷೆಯ ಬಿಟ್ರೆಜ್ ಜರ್ ಡ್ಸುಟಂಗ್ ಡೆರ್ ಯೂಗುಬಿನಿಷನ್ ಟಫಿನ್ (1839) ಎಂಬ ಕೃತಿಯಲ್ಲಿ ಉಮ್ರಿಯನ್ ಶಾಸನಗಳಿಗೆ ಸರಿಯಾದ ಅರ್ಥವಿವರಣೆ ಕೊಡುವ ವಿಧಾನವನ್ನು ತಯಾರಿಸಿದ. ಜೆಶ್ರೆಫ್ ಫ್ರ ಡೈ ಕುಂಡೆ ಡೆಸ್ ಮಾರ್ಗನ್‍ಲೆಂಡ್ಸ್ (7 ಸಂಪುಟಗಳು 1837-50) ಕೃತಿಯಲ್ಲಿ ಬೆಲುಚಿ ಮತ್ತು ಬ್ರಾಹೂಹಿ ಭಾಷೆಗಳ ವ್ಯಾಕರಣದ ನಕಾಶೆ, ಲೈಸಿಯನ್ ಶಾಸನಗಳ ಮೇಲೆ ಒಂದು ಪ್ರಬಂಧವನ್ನು ರಚಿಸಿದ.

ಬಾರ್ನೌಫ್ ಕಾಮೆಂಟರೆ ಸುರ್ ಲೆ ಯೇನಾ (1833) ಪ್ರಕಟವಾದ ಅನಂತರ ಈತ ತನ್ನ ಗಮನವನ್ನು ಜೆಂಡಾ ಮತ್ತು ಇರಾನಿಯನ್ ಅಧ್ಯಯನದ ಕಡೆಗೆ ತಿರುಗಿಸಿದ. ಡೈ ಆಲ್ಟ್‍ಪರ್ಸಿಸೆನ್ ಕೈಲಿನ್‍ಶ್ರಿಫೆನ್ ವಾನ್ ಪರ್ಸೊಪೊಲಿಸ್(1836) ಕೃತಿಯಲ್ಲಿ ಮೊದಲ ಬಾರಿಗೆ ಪ್ರಾಚೀನ ಪರ್ಷಿಯನ್ ಕ್ಯೂನಿಫಾರಂ ಶಾಸನಗಳ ನಿಜವಾದ ಅಕ್ಷರಗಳನ್ನು ತಿಳಿಸಿದ. ಇವನ ಅನಂತರ ಬರ್ನೌಪ್ ಮತ್ತು ಬೆಹಿಸ್ಟನ್ ಹಾಗೂ ಪ್ರಖ್ಯಾತ ಹೆನ್ರಿ ರಾಬಿನ್‍ಸನ್‍ರು ಕ್ಯೂನಿಫಾರಂ ಕುರಿತು ಕೃತಿಗಳನ್ನು ಹೊರತಂದರು. ಯುರೋಪಿನಲ್ಲಿ ನಡೆಯುತ್ತಿದ್ದ ಸಮಕಾಲೀನ ಸಂಶೋಧನೆಯನ್ನು ಹೊರತುಪಡಿಸಿದರೆ ಪರ್ಷಿಯದಲ್ಲಿ ರೂಪುಗೊಂಡ ಈ ಅಧ್ಯಯನ ರಾಯಲ್ ಏಷ್ಯಾಟಿಕ್ ಸೊಸೈಟಿಯನ್ನು ತಲಪಲು ಮೂರು ವರ್ಷ ಬೇಕಾಯಿತು. ಈತ ತನ್ನ ಪತ್ರಿಕೆಯ 7ನೆಯ ಸಂಪುಟದಲ್ಲಿ ತನಗೆ ತಿಳಿದಿದ್ದ ಪರ್ಷಿಯದ ಹಳೆಯ ಕ್ಯೂನಿಫಾರಂ ಶಾಸನಗಳ ಬಗ್ಗೆ ಸಂಗ್ರಹಿಸಿದ್ದೆಲ್ಲವನ್ನು ಪ್ರಕಟಿಸಿದ. ಹೊಸದಾಗಿ ಅನ್ವೇಷಣೆಗೊಂಡ ಬ್ಯಾಕ್ಟ್ರಿಯನ್ ನಾಣ್ಯಗಳನ್ನು ಅರ್ಥೈಸಿದ ಮೊದಲ ಯುರೋಪಿಯನ್ ವಿದ್ವಾಂಸನೀತ. ಇವನ ಅಧ್ಯಯನ ಬ್ಯಾಕ್ಟ್ರಿಯ, ಕಾಬೂಲ್ ಮತ್ತು ಭಾರತದಲ್ಲಿ ಸಿಗುವ ಜರ್ ಗೆಶಿಷೆ ಡೆರ್ ಗ್ರಿಶಿಷೆನ್ ಮತ್ತು ಇಂಡೋ ಸ್ಯಾಕ್ಸನ್ ನಾಣ್ಯಗಳ ಅಧ್ಯಯನಕ್ಕೆ ಸಹಾಯಕವಾಯಿತು. ಅನಂತರ ಈತ ವೆಂಡಿಯಾದ್‍ನ ವಿಮರ್ಶನಾತ್ಮಕ ಆವೃತ್ತಿಯನ್ನು ಹೊರತರಲು ಶ್ರಮಿಸಿದ. ಆದರೆ ಅದರ ಮೊದಲ 5 ಫಾರ್‍ಗಾಡ್ರ್ಸ್‍ಅನ್ನು ಪ್ರಕಟಿಸಿದ. ಈತ ಲೈಫೆಸ್ ಇಂಡಿಶೆ ಆಲ್ಟರ್‍ಟುಮಾಸ್ಕುಂಡೆದ ಕೃತಿಯನ್ನು ಪ್ರಕಟಿಸಲು ಪರಿಶ್ರಮಿಸಿದ. ಅನಂತರ ಇದರ ನಾಲ್ಕು ಸಂಪುಟಗಳು ಕ್ರಮವಾಗಿ ಪ್ರಕಟವಾದವು; ಭಾರತದ ರಾಜಕೀಯ ಸಾಮಾಜಿಕ ಬೌದ್ಧಿಕ ಅಭಿವೃದ್ಧಿಯ ಅಧ್ಯಯನಕ್ಕೆ ಸಹಕಾರಿಯಾದವು. ಭಾರತದ ಬಗ್ಗೆ ಅಧ್ಯಯನ ಮಾಡಿದ ಮಹಾನ್ ವಿದ್ವಾಂಸರುಗಳಲ್ಲಿ ಈತನ ಸೇವೆ ಅಮೋಘವಾದುದು. ಈತ ಅಧ್ಯಾಪನ ವೃತ್ತಿಯಿಂದ ನಿವೃತ್ತನಾದ (1864). ಅನಂತರ ಕೊನೆಗಾಲದಲ್ಲಿ ಅಂಧನಾದ, ಬಾನ್ ಎಂಬಲ್ಲಿ 1876 ಮೇ 8ರಂದು ನಿಧನನಾದ.	
(ಆರ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ